Below Header

Hindu Temple : ಭಾರತದೇಶದಲ್ಲಿನ ಈ ದೇವಾಲಯಗಳು ನಿಮಗೆ ಗೊತ್ತೇ?

ಭಾರತದೇಶದಲ್ಲಿನ ದೇವಾಲಯಗಳನ್ನು ಹೆಚ್ಚಾಗಿ ರಾಜವಂಶಿಕರು ನಿರ್ಮಾಣ ಮಾಡಿರುವುದೇ. ಇವುಗಳಲ್ಲಿ ಕೆಲವು ಮಾತ್ರ ಅದ್ಭುತವಾದ ಕಟ್ಟಡಗಳು, ವಿಶ್ವ ಪಾರಂಪರಿಕ ಸಂಪತ್ತಾಗಿ ನಿಂತಿದೆ. ಭಾರತದಲ್ಲಿನ ಕೆಲವು ಪುರಾತನವಾದ ಮತ್ತು ಅದ್ಭುತವಾದ ದೇವಾಲಯದ ನಿರ್ಮಾಣಗಳನ್ನು ಒಮ್ಮೆ ಗಮನಿಸಿದರೆ...!

ಭಾರತದೇಶದಲ್ಲಿನ ಆಧ್ಯಾತ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೇನು ಕಡಿಮೆ ಇಲ್ಲ. ಆ ಕಾಲದ ರಾಜರು, ರಾಜವಂಶಿಗರು ಅನೇಕ ದೇವಾಲಯವನ್ನು ನಿರ್ಮಾಣ ಮಾಡಿ ಪೋಷಣಾರ್ಥವಾಗಿ ಭೂಮಿಯನ್ನು ನೀಡುತ್ತಿದ್ದರು. ಆ ದಿನಗಳಲ್ಲಿ ಅತ್ಯಧಿಕ ಸಂಪತ್ತನ್ನು ಹೊಂದಿರುವ ದೇವಾಲಯವಾಗಿಯೂ ಕೂಡ ಇರುತ್ತಿತ್ತು. ಹಾಗಾದರೆ ಭಾರತದಲ್ಲಿನ ಆ ಪ್ರಖ್ಯಾತವಾದ ದೇವಾಲಯಗಳು ಯಾವುವು? ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ತಿಳಿಯೋಣ.

1.ಬೃಹದೀಶ್ವರ ದೇವಾಲಯ

 

ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯವನ್ನು ಚೋಳ ರಾಜನಾದ ರಾಜರಾಜ ಚೋಳನು ಕ್ರಿ.ಶ 1002 ರಲ್ಲಿ ನಿರ್ಮಾಣ ಮಾಡಿದನು. ಇದರಲ್ಲಿ ಪ್ರಧಾನವಾದ ದೈವವೆಂದರೆ ಮಹಾಶಿವನು. ಈ ದೇವಾಲಯವು ಅಷ್ಟದೀಪ ಕಲ್ಪಗಳ ವಿಗ್ರಹವನ್ನು ಹೊಂದಿರುವ ದೇವಾಲಯಗಳಲ್ಲಿ ಒಂದು. ಈ ಸುಂದರವಾದ ದೇವಾಲಯವು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಕೊಂಡಿದೆ.

4.ಶ್ರೀ ವರದರಾಜ ಪೆರುಮಾಳ್ ದೇವಾಲಯತಿರುನಲ್ವೆಲಿಯಲ್ಲಿ ಶ್ರೀ ವರದರಾಜ ಪೆರುಮಾಳ್ ದೇವಾಲಯವನ್ನು ಕೃಷ್ಣವರ್ಮ ರಾಜ ನಿರ್ಮಾಣ ಮಾಡಿದ್ದಾರೆ. ದೇವಾಲಯ ತಮಿತಬರನಿ ನದಿ ತೀರದಲ್ಲಿದೆ. ಈ ದೇವಾಲಯದಲ್ಲಿ ಪ್ರಧಾನವಾದ ಮೂಲ ವಿಗ್ರಹವನ್ನು “ಮೂಲವಾರ್” ಎಂದು ಕರೆಯುತ್ತಾರೆ. ಶ್ರೀ ವರದರಾಜ ಪೆರುಮಾಳ್ ದೇವಾಲಯದ ಪ್ರವೇಶ ಸಮಯವು ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಹಾಗು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಭೇಟಿ ನೀಡಬಹುದು.

5.ಸೂರ್ಯ ದೇವಾಲಯ

ಭುವನೇಶ್ವರಕ್ಕೆ 60 ಕಿ.ಮೀ ದೂರದಲ್ಲಿರುವ ಕೊಣಾರ್ಕ್ ಸ್ಮಾರಕ ಕಟ್ಟಡಗಳು ಇರುವ ಸುಂದರವಾದ ಪಟ್ಟಣ. ಇಲ್ಲಿನ ಅತ್ಯಂತ ಆಕರ್ಷಣೀಯವಾದ ಸೂರ್ಯ ದೇವಾಲಯವನ್ನು ನೋಡುವುದಕ್ಕೆ ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದನ್ನು ಕ್ರಿ. ಶ13 ನೇ ಶತಮಾನದಲ್ಲಿ ನರಸಿಂಹ ದೇವ ನಿರ್ಮಾಣ ಮಾಡಿದರು.

Leave A Reply

Your email address will not be published.